ನಗರದ ಇಂದಿರಾನಗರದಲ್ಲಿ ಹೊಸ ವರ್ಷದಂದು ಪುಂಡರ ಗುಂಪೊಂದು ಯುವತಿ ಹಗೂ ಯುವಕನೊಬ್ಬನಿಗೆ ಮನಸೋಇಚ್ಛೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೊಸ ವರ್ಷದಂದು ತಡ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಡಾರ್ಜಲಿಂಗ್ ಮೂಲದ ಅಣ್ಣ-ತಂಗಿಯ ಮೇಲೆ ಕುಡಿದ ಮತ್ತಿನಲ್ಲಿದ್ದ ಗುಂಪೊಂದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ, ಹಲ್ಲೆಯ ವಿಡಿಯೋ ತಡವಾಗಿ ವೈರಲ್ ಆಗಿದ್ದು, ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ.
ಇಂದಿರಾನಗರದಲ್ಲಿ ಹೊಸ ವರ್ಷದಂದು ರಸ್ತೆ ಮಧ್ಯೆ 20ಕ್ಕೂ ಹೆಚ್ಚು ಮಂದಿ ಪಾನಮತ್ತರಾಗಿ ಕುಣಿಯುತ್ತಿದ್ದರು. ಈ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಅಣ್ಣ-ತಂಗಿಯ ಮೇಲೆ ಒಮ್ಮೆಲೆ ಮುಗಿಬಿದ್ದ ಗುಂಪು ಮನಸೋಇಚ್ಛೆ ಇಬ್ಬರಿಗೂ ಥಳಿಸಿದ್ದಾರೆ.

ಘಟನೆ ನಂತರ ಹೆದರಿದ ಅಣ್ಣ-ತಂಗಿ ಯಾವುದೇ ದೂರು ದಾಖಲಿಸಿರಲಿಲ್ಲ, ಆದರೆ ಈಗ ಈ ಹಲ್ಲೆಯ ವಿಡಿಯೊ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
A woman and her brother were assaulted by a drunk mob of revellers on
New Year's Eve in Bengaluru. A CCTV footage that surfaced on Tuesday
purportedly shows an incident that took place on the night of December
31, 2017, in Indiranagar locality of Bengaluru.